HISTORY


ನಾಲ್ಕು ಮಾತುಗಳು...

ನಮ್ಮ ಕೂಡು ಕುಟುಂಬದ ಮೂರು ಕವಲುಗಳ ದೇವತಾ ಕಾರ್ಯಗಳು, ಕ್ರೀಡಾ ಮತ್ತು  ಸಾಂಸ್ಕೃತಿಕ ಕಾರ್ಯಗಳು ( 10 ಮತ್ತು 11) ಬಹಳ ವಿಜೃಂಭಣೆಯಿಂದ ನಡೆಯಿತು. ಪ್ರಾಯಶಃ ಇಂತಹದ್ದೊಂದು ಕಾರ್ಯಕ್ರಮ ಕುಟುಂಬದ ವತಿಯಿಂದ ಹಿಂದೆ ನಡೆದಿರಲಿಕ್ಕಿಲ್ಲ. ಎಲ್ಲರೂ ಸೇರಿ ಒಗ್ಗಟ್ಟಾಗಿ ಮಾಡಿದ ಕಾರ್ಯಕ್ರಮ. ಕೆಲವರ ಪಾತ್ರ ಹೆಚ್ಚಿರಬಹುದು ಮತ್ತು ಕೆಲವರದ್ದು ಕಡಿಮೆ ಇರಬಹುದು. ಆದರೆ, ಎಲ್ಲರ ಪಾತ್ರವೂ ಇತ್ತು. ಅದ್ಭುತವಾಗಿತ್ತು. ಕ್ರೀಡೆಯಲ್ಲಿ ಖುಷಿ, ಹರ್ಷದ ಚಿಲುಮೆ ಚಿಮ್ಮಿದ್ದರೆ, ಹಿರಿಯರಿಗೆ ಗೌರವಾರ್ಪಣೆ ಭಾವನಾತ್ಮಕವಾಗಿತ್ತು. ಹೃದಯ ಸ್ಪರ್ಶಿ ಆಗಿತ್ತು. ಕಾರ್ಯಕ್ರಮದ ಉದ್ದೇಶ ಮೊದಲ ತಲೆಮಾರಿನಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಈಗಿನ ಪೀಳಿಗೆಯವರಿಗೆ ತಿಳಿಸುವುದಾಗಿತ್ತು ಅಷ್ಟೇ. ಇದನ್ನು ಮೆಚ್ಚಿಕೊಂಡವರು ಅನೇಕರು. ಇದೊಂದು ಮೊದಲ ಪ್ರಯತ್ನ. ಕೆಲಸಕ್ಕೆ ಸಾಕಷ್ಟು ಜನ ಕೈಜೋಡಿಸಿದ್ದರು. ಕೆಲವರು ಹಣದಲ್ಲಿ, ಇನ್ನು ಕೆಲವರು ಸೇವಾ ರೂಪದಲ್ಲಿ. ಲಂಕೆಗೆ ಶ್ರೀರಾಮ ಸೇತುವೆ ಕಟ್ಟುವಾಗ ಪುಟ್ಟ ಅಳಿಲು ಕೂಡ ಕಾರ್ಯದಲ್ಲಿ ತನ್ನ ಕೈಜೋಡಿಸಿತ್ತು ಎಂಬುದನ್ನು ಜನ ಈಗಲೂ ಮರೆತಿಲ್ಲ. ನಮ್ಮ ಕುಟುಂಬದ ಕಾರ್ಯಕ್ರಮವೂ ಅಷ್ಟೆ, ಚಿಕ್ಕದ್ದು, ದೊಡ್ಡದ್ದು ಎಂಬುದಲ್ಲ. ಎಲ್ಲವೂ ಸೇವೆಯೇ. ಎಲ್ಲವೂ ಮಾನ್ಯವೇ. ಆದ್ದರಿಂದ, ಇಲ್ಲಿ ಯಾರ ಹೆಸರೂ ಪ್ರಸ್ತಾಪಿಸಲು ಹೋಗದೇ, ಎಲ್ಲರೂ ಎಂಬ ಪದವನ್ನೇ ಬಳಸುತ್ತಿದ್ದೇನೆ.  ಧಾರ್ಮಿಕ ಕಾರ್ಯಕಮದಲ್ಲಿ ಬಹುತೇಕರಲ್ಲಿ 
ಭಕ್ತಿಯ ತನ್ಮಯತೆ ಕಂಡು ಬಂದಿತು. ಕೋಲ ಮರೆಯಲಾಗದ್ದು. ನಮ್ಮ ಕುಟುಂಬ ಕತ್ತಲ ದಿನಗಳನ್ನು ಕಳೆದು ಬೆಳಕು ಕಾಣಲು ಹೊರಟಿರುವ ಸಂದರ್ಭವಿದು. ದಿವ್ಯ ಬೆಳಕು ಎಲ್ಲರನ್ನು ಸ್ಪರ್ಶಿಸಬೇಕು ಎಂಬುದೇ ನನ್ನ ಆಶಯ. ಬೆಳಕು ವಿಚಾರ, ವೈಚಾರಿಕತೆ, ಬೌದ್ಧಿಕತೆಯ, ಅಧ್ಯಾತ್ಮದ ತುಡಿತದ ಬೆಳಕಾಗಿರಬೇಕು. ಅದನ್ನು ಹೊಂದಲು ನಾವೆಲ್ಲರೂ ಸಾಮೂಹಿಕವಾಗಿ ಪ್ರಯತ್ನಿಸೋಣ
ಕಾರ್ಯಕ್ರಮಕ್ಕಿಂತಲೂ ಮೊದಲು ಬ್ಲಾಗ್ ಆರಂಭಿಸಿದ ರಾಮಪ್ರಸಾದ್ ಅವರಿಗೆ ನನ್ನ ಅಭಿನಂದನೆಗಳು. ಇಂತಹ ಹೊಸ ಆಲೋಚನೆಗಳು ಇನ್ನಷ್ಟು ಹೊರ ಹೊಮ್ಮಬೇಕು.ಮುಂದಿನ ದಿನಗಳಲ್ಲಿ ಕುಟುಂಬದ ಸದಸ್ಯರಿಗಾಗಿ ರಚನಾತ್ಮಕ ಕಾರ್ಯಗಳಿಗೆ
ಪರಸ್ಪರರ ಅಭಿವೃದ್ಧಿ, ಏಳಿಗೆ, ಸಹಕಾರಕ್ಕೆ ಬಳಕೆ ಆಗಬೇಕು ಎಂಬುದು ನನ್ನ ಬಯಕೆ. ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಮಾರ್ಗದರ್ಶನ, ಶಿಕ್ಷಣ ಪಡೆದವರಿಗೆ ಉದ್ಯೋಗಕ್ಕೆ ಸಲಹೆ ಸೂಚನೆ, ನಮ್ಮಲ್ಲಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡಿ ಅದರ ಅನಾವರಣಕ್ಕೆ ಅವಕಾಶ, ಸರಿಯಾದ ಸಲಹೆ ಸೂಚನೆ ನೀಡುವ ಕೆಲಸ ಮೂಲಕ ಮಾಡಬಹುದು. ನಾವು ಮಾಡಬಹುದಾದ ಇನ್ನೊಂದು ಮಹತ್ವದ ಕೆಲಸ ಎಂದರೆ ಸುಸಂಸ್ಕೃತ ಕುಟುಂಬವಾಗಿಸುವ ದಿಸೆಯಲ್ಲಿ ಒಂದು ಸಾಮೂಹಿಕ. ಸುಂಸ್ಕೃತವಾಗಿಸುವುದು ಎಂದರೆ ಬೇರೇನೂ ಅಲ್ಲ ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಅದರಿಂದ ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳುವುದು. ದಿಸೆಯಲ್ಲಿ ಅಭಿರುಚಿ ಬೆಳೆಸಿಕೊಳ್ಳುವುದು. ಉದಾಹರಣೆಗೆ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೂಚುಪುಡಿ, ಯಕ್ಷಗಾನ, ತಾಳಮದ್ದಲೆ, ಗಮಕ, ಸುಗಮ ಸಂಗೀತ, ಜನಪದ ಸಂಗೀತ, ಚಿತ್ರಕಲೆ, ಉತ್ತಮ ಪುಸ್ತಕಗಳನ್ನು ಓದುವುದರ ಒಲವು ಬೆಳೆಸಿಕೊಳ್ಳುವುದು ಮತ್ತು ತೊಡಗಿಸಿಕೊಳ್ಳುವುದು. ನಮ್ಮ ಕುಟುಂಬದಲ್ಲಿ ಇದರ ಕೊರತೆ ಇದೆ ಎಂಬುದು ನನ್ನ ಗ್ರಹಿಕೆಯಾಗಿತ್ತು. ಆದರೆ, ಮೊನ್ನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಅದನ್ನು ಸುಳ್ಳಾಗಿಸಿತು. ಹಲವು ಮಕ್ಕಳಲ್ಲಿ ಭರವಸೆ ಕಂಡಿದ್ದೇನೆ. ಒಳ್ಳೆ ಹಾಡುವವರಿಗೆ ಶಾಸ್ತ್ರೀಯ ಸಂಗೀತದ ಆಸರೆ ಸಿಗಬೇಕು. ಅದೇ ರೀತಿ ನೃತ್ಯದಲ್ಲಿ ಅಭಿರುಚಿ ಇರುವವರು ಶಾಸ್ತ್ರೀಯ ಸಂಗೀತದತ್ತ ಒಲವು ಬೆಳೆಸಿಕೊಳ್ಳುವಂತೆ ಅವರ ಅಪ್ಪ- ಅಮ್ಮಂದಿರ ಮನವೊಲಿಸಬೇಕು. ಸಿನಿಮಾ ನೃತ್ಯಗಳು, ಡಿಸ್ಕೋ ಮುಂತಾದವು ಅಷ್ಟೊಂದು ಸಭ್ಯತೆಯಿಂದ ಕೂಡಿರುವುದಿಲ್ಲ. ಪ್ರಚೋದನೆಯಿಂದ ಕೂಡಿರುತ್ತವೆ. ಅತ್ಯಂತ ದೊಡ್ಡ ಸ್ಥಾನ ಏರಬಯಸುವವರಿಗೆ ಇಂತಹವು ನೆರವಾಗುವುದಿಲ್ಲ. ಶಾಸ್ತ್ರೀಯ ಸಂಗೀತ ಮತ್ತು  ನೃತ್ಯ, ಚಿತ್ರ ಕಲೆ, ಯಕ್ಷಗಾನ ಮನಸ್ಸಿನ ಬೆಳವಣಿಗೆಗೆ, ಐಕ್ಯೂ ಹೆಚ್ಚಲು ಕಾರಣವಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಪ್ರೂವ್ ಆಗಿರುವ ಸಂಗತಿ. ಮುಂಬರುವ ದಿನಗಳಲ್ಲಿ ಕುರಿತ ಲೇಖನಗಳ ಲಿಂಕ್ ಹಾಕುತ್ತೇನೆ. ವಿದ್ಯಾರ್ಥಿಗಳು ಅಥವಾ ಅಪ್ಪ- ಅಮ್ಮಂದಿರು ಅದನ್ನು ಓದಿ ಮಕ್ಕಳಿಗೆ ತಿಳಿಸಬಹುದು, ನೆಟ್ ಸೌಲಭ್ಯ ಇಲ್ಲದವರಿಗೆ, ಇದ್ದವರು ಇಂತಹ ವಿಷಯಗಳನ್ನು ತಿಳಿಸುವ ಕೆಲಸ ಮಾಡಬಹುದು ಎಂಬುದು ನನ್ನ ಭಾವನೆ. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ನಮ್ಮ ಬ್ಲಾಗ್ ನೋಡಿ. ಅದರಲ್ಲಿನ ವಿಷಯಗಳ ಬಗ್ಗೆ ಅಭಿಪ್ರಾಯ ತಿಳಿಸಿ. ಇಂತಹ ಮಾತುಕತೆ ಉತ್ತಮ. ವಾಟ್ಸಪ್ ಗ್ರೂಪ್ ಕೂಡ ಮಾಡಬಹುದೇನೋ. ಈಗ ಚಿಂತಿಸಬಹುದು. ಒಟ್ಟಿನಲ್ಲಿ ಯುವ ಸಮುದಾಯ ಕ್ರಿಯಾಶೀಲವಾಗಬೇಕು. ಮುಂದಿನ ದಿನದಲ್ಲಿ ಕುಟುಂಬದ ಯುವ ಸಮುದಾಯ ರಚನಾತ್ಮಕವಾಗಿ ಏನೆಲ್ಲ ಮಾಡಬಹುದು ಎಂಬುದನ್ನು ಚಿಂತಿಸಬಹುದು. ಯಾರ ಮನೆಯಲ್ಲಿ ಕಂಪ್ಯೂಟರ್ ಇದ್ದು ಕನ್ನಡ ಸಾಫ್ಟ್ವೇರ್ ಇಲ್ಲವೋ ಅವರು ನುಡಿ ಸಾಫ್ಟ್ವೇರ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಬಹುದು. ವಿಷಯಗಳಿದ್ದರೆ, ವೇದಿಕೆಯಲ್ಲಿ ಹಂಚಿಕೊಳ್ಳೊಣ. ಯಾರಿಗೂ ಹರ್ಟ್ ಆಗಬಹುದಾದ ಕೌಟುಂಬಿಕ ವಿಷಯಗಳ ಚರ್ಚೆ ಮಾತ್ರ ಬೇಡ. ನಿಮ್ಮ - ನಿಮ್ಮ ಮನೆಯಲ್ಲಿ ನಡೆಯುವ ದೇವತಾ ಕಾರ್ಯಕ್ರಮ, ಗೆಟ್ಟುಗೆದರ್, ತೀರ್ಥಯಾತ್ರೆ, ಮಕ್ಕಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಆದರೆ, ಒಳ್ಳೆ ಸಂಗೀತ, ನೃತ್ಯ ಕಾರ್ಯಕ್ರಮ ಮಾಡಿದಾಗ ಚಿತ್ರಗಳನ್ನು ಪೋಸ್ಟ್ ಮಾಡಿ. ಕೃಷಿ ಚಟುವಟಿಕೆಯಲ್ಲಿ ತೊಡಗಿದವರು ಬಂಪರ್ ಬೆಳೆ ಬೆಳೆದಾಗ, ದೊಡ್ಡ ಕುಂಬಳಕಾಯಿಯನ್ನೋ ಮತ್ತೇನ್ನನೊ ಬೆಳೆದಾಗ ಅದರ ಬಗ್ಗೆ ಬರೆದು ಚಿತ್ರವನ್ನು ಪೋಸ್ಟ್ ಮಾಡಿ. ಬ್ಲಾಗ್ ಇನ್ನಷ್ಟು ಉತ್ತಮ ಪಡಿಸಲು ಇತರ ಪ್ರತಿಭಾವಂತ ಎಂಜಿನಿಯರ್ಗಳು ರಾಮ್ಪ್ರಸಾದ್ ಜತೆ ಕೈಜೋಡಿಸಿ, ಸಲಹೆ ಸೂಚನೆ ನೀಡಬಹುದು. ನಾನೇ ತಯಾರಿಸಿರುವ ಒಂದು ವಿಡಿಯೋ ಡಾಕ್ಯುಮೆಂಟರಿ ಲಿಂಕ್ ಇದೆ. ಅದನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಧನ್ಯವಾದಗಳು.

ಎಸ್. ರವಿಪ್ರಕಾಶ್


 A Book named as "VAMSHA VRAKSHA" written by Mr. S. Raviprakash, Click here 





No comments:

Post a Comment