Sunday, 17 May 2015

ಭಾವಪೂರ್ಣ ಶೃದ್ಧಾಂಜಲಿ

                                                ಕೋಟೆಬಾಗಿಲು ವಾಸುದೇವರಾವ್

ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪದಾರಯ
ಅಹಂ ಕೃತ್ಯ್ನಸ್ಯ ಜಗತಃ ಪ್ರಭುವಃ ಪ್ರಲಯಸ್ತಥಾ
(ಅಂದರೆ, ಸೃಷ್ಟಿಯಾದ ಎಲ್ಲ ಜೀವಿಗಳಿಗೂ ಎರಡು ಪ್ರಕೃತಿಗಳೇ ಮೂಲ. ಈ ಭೌತಿಕ ಜಗತ್ತಿನಲ್ಲಿ ಭೌತಿಕವಾದ ಮತ್ತು ಅಧ್ಯಾತ್ಮಿಕವಾದ ಎಲ್ಲದರ ಮೂಲ ಮತ್ತು ಅಂತ್ಯವೂ ನಾನೇ ಎಂದು ತಿಳಿದುಕೋ- ಶ್ರೀಕೃಷ್ಣ, ಭಗವದ್ಗೀತೆ)

 ಕೋಟೆಬಾಗಿಲು ವಾಸುದೇವರಾವ್ ಅವರ ನಿಧನ ಕುಟುಂಬದ ಎಲ್ಲ ಸದಸ್ಯರನ್ನೂ ದುಃಖದ ಕಡಲಿಗೆ ದೂಡಿದೆ. ಇದೊಂದು ಅನಿರೀಕ್ಷಿತ. ಅವರ ಅವಿನಾಶಿ ಆತ್ಮವು ಭಗವಂತನ ಸನ್ನಿಧಿ ಸೇರಲಿ ಎಂದು ಎಲ್ಲರೂ ಪ್ರಾರ್ಥಿಸೋಣ.



Sunday, 1 February 2015

ಕುಟುಂಬ ಹೇಗಿದ್ದರೆ ಚೆನ್ನ:

ಕುಟುಂಬ ಹೇಗಿದ್ದರೆ ಚೆನ್ನ:
ಹಿಂದೂ ಸಂಸ್ಕೃತಿಯು ಸನಾತನವಾದುದು. ಸನಾತನದ ಅರ್ಥ ಶಾಶ್ವತ ಎಂದು. ಚಿರಪುರಾತನವೂ ಹೌದು; ನಿತ್ಯನೂತನವೂ ಹೌದು. ನಮ್ಮ ಸಂಸ್ಕೃತಿಯ ಈ ಎಣೆ ಇಲ್ಲದ ಸಾಮರ್ಥ್ಯದ ಕಾರಣಗಳು ಹಲವಾರು. ಈ ಪೈಕಿ ಒಂದು ಕಾರಣ ನಮ್ಮ ಹಿಂದೂ ಕುಟುಂಬ ವ್ಯವಸ್ಥೆ. ಹಿಂದು ಕುಟುಂಬದಲ್ಲಿ ಭೌತಿಕ ಅವಶ್ಯಕತೆಗಳ ಪೂರೈಕೆ ಆಗುವುದರ ಜತೆ, ಪರಸ್ಪರರ ಸಂಬಂಧಗಳು ದೃಢವಾಗುತ್ತವೆ.ಅಷ್ಟೇ ಅಲ್ಲದೆ ಪ್ರತಿಯೊಬ್ಬ ಸದಸ್ಯನೂ ಮಾಡಲೇಬೇಕಾದ ಪುಣ್ಯ ಕೆಲಸಗಳ ಬಗ್ಗೆ ಶ್ರದ್ಧೆ ಹಾಗೂ ಮಾಡಬಾರದ ಪಾಪಕಾರ್ಯಗಳ ಬಗ್ಗೆ ಅರಿವು ಮೂಡುತ್ತದೆ. ಇದರ ಪರಿಣಾಮವಾಗಿ ಪ್ರತಿಯೊಬ್ಬನೂ ಸುಯೋಗ್ಯನಾಗಿ ಸಮಾಜಕ್ಕೆ ಶಕ್ತಿಯನ್ನು ತುಂಬುತ್ತಾನೆ. ನಮ್ಮ ಕುಟುಂಬಗಳು ಶ್ರೇಷ್ಠ ವ್ಯಕ್ತಿಗಳ ನಿರ್ಮಾಣದ ಕೇಂದ್ರಗಳಾಗಬೇಕು. ಒಳ್ಳೆಯದನ್ನು ಮಾಡಿಯೇ ತೀರುತ್ತೇವೆ. ಕೆಟ್ಟದ್ದನ್ನು ಎಂದೂ ಮಾಡಲಾರೆವು ಎಂಬ ಮನೋಬಲವನ್ನು ನಿರ್ಮಾಣ ಮಾಡುವ ಕೇಂದ್ರಗಳಾಗಬೇಕು.

ಹಿಂದೂ ಜೀವನದ ವಿಶೇಷತೆಗಳು:
*ಪ್ರತಿ ನಿತ್ಯ ಮೂರು ಕೆಲಸ ತಪ್ಪದೇ ಮಾಡಬೇಕು- ನಿತ್ಯ ಸ್ನಾನ, ನಿತ್ಯ ಧ್ಯಾನ ಮತ್ತು ನಿತ್ಯ ವ್ಯಾಯಾಮ

*ವಾರದಲ್ಲಿ ಒಂದು ದಿನ- ತಲೆಯಿಂದ ಪಾದಗಳ ಅಂಗಾಲಿನವರೆಗೆ ಇಡೀ ಶರೀರಕ್ಕೆ ಎಣ್ಣೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುವುದು.

*15 ದಿನಗಳಿಗೊಮ್ಮೆ ಉಪವಾಸ ವ್ರತ ಮಾಡುವುದು.

*ವರ್ಷಕ್ಕೊಮ್ಮೆ ಕುಟುಂಬ ಸಮೇತ ಪ್ರೇರಣೆ ನೀಡುವ ಸ್ಥಳಗಳಿಗೆ, ಕುಲದೇವರ ಸನ್ನಿಧಿ, ಗುರುಮಠಕ್ಕೆ ಹೋಗಿ ಕನಿಷ್ಠ 1 ದಿನ ತಂಗುವುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು.

*ವಾರದಲ್ಲಿ ಒಮ್ಮೆ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಒಂದು ಗಂಟೆ ಅಥವಾ ಅರ್ಧ ಗಂಟೆ ಸತ್ಸಂಗ ಅಥವಾ ಭಜನೆ ಮಾಡುವುದು.

*ಮನೆಯಲ್ಲಿ ಧಾರ್ಮಿಕ ಗ್ರಂಥಗಳಾದ ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತ ಇಟ್ಟುಕೊಂಡು ಓದುವುದು.(ನೆನಪಿರಲಿ- ಹಿಂದುಗಳಾಗಿ ನಾವು ನಮ್ಮ ಪವಿತ್ರ ಗ್ರಂಥಗಳನ್ನು ಇಟ್ಟುಕೊಳ್ಳಬೇಕು ಮತ್ತು ಓದಬೇಕು. ಅರ್ಥ ತಿಳಿದುಕೊಳ್ಳಬೇಕು )

*ಮನೆಯಲ್ಲಿ ಭಜನೆ, ಕೀರ್ತನೆ, ಸತ್ಸಂಗ ಮಾಡಬೇಕು. ಮನೆಯಲ್ಲಿ ದೇವರಿಗೊಂದು ಕೋಣೆ ಇರಲಿ. ನಿತ್ಯ ಬೆಳಗ್ಗೆ ಮತ್ತು ಸಂಜೆ ಅಲ್ಲಿಗೆ ಹೋಗಿ ಕೆಲವು ನಿಮಿ‍ಷಗಳು ಕುಳಿತು ಪ್ರಾರ್ಥಿಸಿ.

*ಸಂಸ್ಕೃತ ಭಾಷೆಯನ್ನು ಕಲಿಯುವುದರ ಬಗ್ಗೆ ಆಸಕ್ತಿ ಇರಲಿ. ಸಂಸ್ಕೃತ ಅಲ್ಲದೆ, ಒಳ್ಳೆಯ ವಿಷಯಗಳನ್ನು ತಿಳಿದುಕೊಂಡರೆ ಸುಸಂಸ್ಕೃತರಾಗಬಹುದು. ಕೆಟ್ಟ ಸಿನಿಮಾ, ಸೀರಿಯಲ್‍ಗಳಿಂದ ಪ್ರಭಾವಿತರಾಗಿ ವರ್ತಿಸಿದರೆ, ಆ ವ್ಯಕ್ತಿಯ ಘನತೆಯೂ ಸಮಾಜದಲ್ಲಿ ಕೆಳಮಟ್ಟದಲ್ಲೇ ಇರುತ್ತದೆ. ಇದನ್ನು ಕುಸಂಸ್ಕೃತಿ ಎನ್ನಲಾಗುತ್ತದೆ.

*ಮನೆಯಲ್ಲಿ ಉಳಿತಾಯ ಮಾಡುವ ಅಭ್ಯಾಸವಿರಲಿ. ಇದರಿಂದ ಧನದ ಬಗ್ಗೆ ಗೌರವ ಭಾವನೆ ಬರುತ್ತದೆ.

* ರಾತ್ರಿ ಮಲಗುವ ಮೊದಲು ದೇವರ ಸ್ಮರಣೆ ಮಾಡುವ ಅಭ್ಯಾಸವಿರಲಿ, ದಿನವಿಡೀ ಮಾಡಿದ ಕೆಲಸಗಳ ಅವಲೋಕನವನ್ನು ಶುದ್ಧ ಮನಸ್ಸಿನಿಂದ ಮಾಡುವ ಅಭ್ಯಾಸ ಒಳ್ಳೆಯದು.

*ನಮ್ಮ ಮಾತೃಭಾಷೆಯನ್ನು ಮನೆಯಲ್ಲಿ ಆಡುವುದರ ಜೊತೆಗೆ ಇತರ ಭಾಷೆಗಳನ್ನೂ ಕಲಿಯಬೇಕು.

* ಶುಭ ಸಂದರ್ಭಗಳಲ್ಲಿ ಮಂಗಲ ಸ್ನಾನ, ಶುಭ್ರ ವಸ್ತ್ರ (ಬಿಳಿ ಪಂಚೆ ಮತ್ತು ಬಿಳಿ, ಕೆನೆ ಬಣ್ಣದ ಅಂಗಿ ತೊಟ್ಟರೆ ಒಳ್ಳೆಯದು. ಹೆಂಗಸರು ರೇಷ್ಮೆ ಸೀರೆ ಉಡಬಹುದು) ಧರಿಸಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುವುದು. ದಾನ ಮಾಡುವುದು ಸಿಹಿ ಹಂಚುವುದು ಒಳ್ಳೆಯದು. ವಸ್ತ್ರ ನಮ್ಮ ಸಂಸ್ಕೃತಿ ಬಿಂಬಿಸುವಂತಿರಲಿ.
( ಬಣ್ಣ ಬಣ್ಣದ ಚೌಕುಳಿ ಲುಂಗಿ ಉಟ್ಟು ದೇವಸ್ಥಾನಗಳಿಗೆ ಹೋಗುವುದು, ಮನೆಯಲ್ಲಿ ದೇವತಾ ಕಾರ್ಯಗಳಿಗೆ ಧರಿಸುವುದು ಸರಿಯಲ್ಲ. ಇದು  ಮೀನು ಮಾರುವಾಗ ಇತರೆ ವ್ಯಾಪಾರ ಮಾಡುವಾಗ ಧರಿಸುವ ಉಡುಪು. ಆದ್ದರಿಂದ ನಮ್ಮ ದೇವತಾ ಕಾರ್ಯಗಳಿಗೆ ಹೋಗುವಾಗ ಬಿಳಿ, ಕೇಸರಿ ಪಂಚೆಯನ್ನೇ ಉಡೋಣ. ಹೆಂಗಸರು ನೈಟಿ ಉಟ್ಟು ದೇವತಾಕಾರ್ಯಗಳಲ್ಲಿ ಭಾಗವಹಿಸುವ ಚಾಳಿಯನ್ನು ಬಿಡಬೇಕು)

*ಮದುವೆ ಇತ್ಯಾದಿ ಮಂಗಲ ಕಾರ್ಯಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಧಾರ್ಮಿಕ ಭಾಗಕ್ಕೆ ಮಹತ್ವ ಕೊಡಬೇಕು ಅದನ್ನು ಶ್ರದ್ಧೆಯಿಂದ, ಶಾಂತವಾಗಿ, ಏಕಾಗ್ರತೆಯಿಂದ ನಡೆಸಬೇಕು.


ಮಾಹಿತಿ- ಕುಟುಂಬ ಪ್ರಬೋಧನ (ಪರಿವಾರ ಪ್ರದೀಪಿಕಾ)

Friday, 23 January 2015

NEWS EVENT PAGE

Dear all members please go through the page NEWS EVENTS and collect the information regarding Jobs ,Scholarships ,Education  related information’s and many more.... 


Share this information to your family members and relatives 

Thursday, 1 January 2015

INVITATION



ದೇವತಾ ಕಾರ್ಯಕ್ರಮಗಳು:

ಜನವರಿ 10, ಶನಿವಾರ, 2015:

ಬೆಳಿಗ್ಗೆ 9 ಗಂಟೆ; ಪುಂಡರ್ಕ ನಾಗಬನದಲ್ಲಿ ಆಶ್ಲೇಷ ಬಲಿ, ವಟು ಆರಾಧನೆ, ನವಕ ಪೂಜೆ ಮತ್ತು ಮಹಾ ಮಂಗಳಾರತಿ
ಕೋಟೆಬಾಗಿಲು ನಾಗಬನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ

ಮಧ್ಯಾಹ್ನ 1.30; ಪ್ರಸಾದ ಅನ್ನಸಂತರ್ಪಣೆ.

ಸಂಜೆ 6 ರಿಂದ 7 ರಾತ್ರಿ ಗಣಹೋಮ

ರಾತ್ರಿ 7 ರಿಂದ ರಾತ್ರಿ 10 ವನದುರ್ಗಾ ಹೋಮ, ಮಹಾಮಂಗಳಾರತಿ.
ಪ್ರಸಾದ ಭೋಜನ


ಜನವರಿ 11, ಭಾನುವಾರ, 2015

ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಧನ್ವಂತ್ರಿ ಹೋಮ, ಸತ್ಯನಾರಾಯಣಪೂಜೆ, ಕುಲದೇವತಾ ಆರಾಧನೆ, ಮುಡಿಪು ಕಟ್ಟುವುದು, ಮಹಾಮಂಗಳಾರತಿ, ಪ್ರಸಾದ ವಿನಿಯೋಗ.

ಮಧ್ಯಾಹ್ನ 1.30 ಪ್ರಸಾದ ಅನ್ನಸಂತರ್ಪಣೆ.

ಸಂಜೆ 6 ರಿಂದ ರಾತ್ರಿ 7 ಕ್ಕೆ ಸತ್ಯದೇವತೆಗೆ ಪೂಜೆ( ರಾಶಿ ಪೂಜೆ)

ರಾತ್ರಿ 9 ಭಂಡಾರ ಪೂಜೆ, ಎಣ‍್ಣೆ ಪೂಜೆ

ರಾತ್ರಿ 10 ರ ನಂತರ ದೈವಗಳ ನೇಮೋತ್ಸವ.
              

ಮೂಲ "ಪುಂಡರ್ಕ  ಮಂಜುನಾಥಯ್ಯ" ಕುಟುಂಬದ ಎಲ್ಲ ಸದಸ್ಯರು ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿ, ಸಕ್ರಿಯರಾಗಿ ಭಾಗವಹಿಸಬೇಕು. ಮೂಲಕ ದೈವ ಕೃಪೆಗೆ ಪಾತ್ರರಾಗಬೇಕು.


ಹೆಚ್ಚಿನ ವಿವರಗಳಿಗೆ ಸಂಪರ್ಕಿಸುವುದು-

ವಾಸುದೇವರಾವ್‍, ದೂರವಾಣಿ…. 9482049077

ವಿಜಯೇಂದ್ರರಾವ್‍, ದೂರವಾಣಿ…. 9663384743